ಬಿಜೆಪಿ ಸದಸ್ಯರೊಬ್ಬರು ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಒವೈಸಿ ವಿರುದ್ಧ ಕೆಂಡಾಮಂಡಲವಾದ ಅಮಿತ್ ಶಾ (ವಿಡಿಯೋ)

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಲೋಕಸಭೆಯಲ್ಲಿ ಸೋಮವಾರ ಗೃಹ ಸಚಿವ ಅಮಿತ್ ಶಾ ಮತ್ತು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ನಡುವೆ ಮಾತಿನ ಜಟಾಪಟಿ ನಡೆದಿದೆ .ರಾಷ್ಟ್ರೀಯ ತನಿಖಾ ಸಂಸ್ಥೆ ಕುರಿತಾದ ಮಸೂದೆ ತಿದ್ದುಪಡಿ ಕುರಿತಾಗಿ ಬಿಜೆಪಿ ಸದಸ್ಯ ಸತ್ಯಪಾಲ್ ಸಿಂಗ್ ಅವರು ಒವೈಸಿ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಿದ್ದಂತೆ ತಕರಾರು ಎತ್ತಿ ಭಾಷಣಕ್ಕೆ ಅಡ್ಡಿಪಡಿಸಲು ಮುಂದಾದಾಗ ಅಮಿತ್ ಶಾ ಅವರು ಎದ್ದು ನಿಂತು ಒವೈಸಿಯನ್ನು ಕೈತೋರಿಸುತ್ತಾ ಪ್ರತಿಪಕ್ಷದ ನಾಯಕರಿಗೆ ಇತರರ ದೃಷ್ಟಿಕೋನವನ್ನು ಕೇಳುವ ತಾಳ್ಮೆ ಹೊಂದಿರಬೇಕು, ಮತ್ತು ಸದನದಲ್ಲಿ ಮಾತನಾಡಲು ಅವಕಾಶ ನೀಡಬೇಕೆಂದು ಜೋರಾಗಿ ಹೇಳಿದರು. ಇದರಿಂದ ಆಕ್ರೋಶಗೊಂಡ ಓವೈಸಿ ಅವರು ನೀವು ನನ್ನ ಅತ್ತ ಬೆರಳು ತೋರಿಸಿ ನನಗೆ ಹೆದರಿಸಬೇಡಿ ನಾನು ಹೆದರುವವನು ಅಲ್ಲ ಎಂದು ಪ್ರತಿಪಾದಿಸಿದರು .ಇದಕ್ಕೆ ಪ್ರತಿಯಾಗಿ ಅಮಿತ್ ಶಾ ಅವರು ತಾವು ಯಾರನ್ನೂ ಹೆದರಿಸುತ್ತಿಲ್ಲ ಆದರೆ ಯಾರ ಮನಸ್ಸಿನಲ್ಲಿ ಭಯ ಇದೆಯೋ ಅವರಿಗೆ ನಾನು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು .ಇಬ್ಬರು ನಾಯಕರ ನಡುವೆ ನಡೆದ ಜಟಾಪಟಿ ವಿಡಿಯೋ ನೋಡಿ

Leave a Reply

Your email address will not be published. Required fields are marked *