ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜೀನಾಮೆ ಸಲ್ಲಿಸಲು ಓಡೋಡಿ ಬಂದ ಶಾಸಕರು

ಈ ಸುದ್ದಿಯನ್ನು ಶೇರ್ ಮಾಡಿ

ಮೈತ್ರಿ ಸರ್ಕಾರದಿಂದ ಮುನಿಸಿಕೊಂಡು ಅತೃಪ್ತ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಇಂದು ನೀಡಿದ ಆದೇಶದಲ್ಲಿ ಸಂಜೆ ಆರು ಗಂಟೆಯ ಒಳಗೆ ರಾಜೀನಾಮೆ ವಿಚಾರವನ್ನು ಇತ್ಯರ್ಥ ಮಾಡಲು ಸೂಚಿಸಿತ್ತು .ಆ ಹಿನ್ನೆಲೆಯಲ್ಲಿ ಮುಂಬಯಿಯಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅತೃಪ್ತ ಶಾಸಕರು ವಿಧಾನಸಭೆ ಪ್ರವೇಶಿಸುತ್ತಿದ್ದಂತೆ ಆರು ಗಂಟೆಯಾಗಿತ್ತು .ಇನ್ನು ಅತೃಪ್ತ ಶಾಸಕರಲ್ಲಿ ಒಬ್ಬರಾದ ಭೈರತಿ ಬಸವರಾಜ್ ಕಚೇರಿಯತ್ತ ಓಡುತ್ತಲೇ ಸುದ್ದಿಯಾಗಿದ್ದಾರೆ ಇತಿಹಾಸದಲ್ಲೇ ಮೊದಲ ಬಾರಿ ಕರ್ನಾಟಕದಲ್ಲಿ ರಾಜೀನಾಮೆ ನೀಡಲು ಶಾಸಕರು ಓಡಿ ಬಂದಿದ್ದಾರೆ

Leave a Reply

Your email address will not be published. Required fields are marked *