ದೆಹಲಿ ಈದ್ ಸಂದರ್ಭ ಹಿಗ್ಗಾ ಮುಗ್ಗಾ ಕಾರು ಚಲಾಯಿಸಿ ಉಧ್ವಿಗ್ನ ಪರಿಸ್ಥಿಗೆ ಕಾರಣರಾದವನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ ಈದ್ ಸಂದರ್ಭ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರ ಬರುತ್ತಿದ್ದ ಜನರ ಸಮ್ಮುಖದಲ್ಲಿ ಹಿಗ್ಗಾಮುಗ್ಗಾ ಕಾರು ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಬುಧವಾರ ಖುರೂಜಿ ಗ್ರಾಮದಲ್ಲಿ ಈದ್ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವೇಳೆ ಜನರ ಮೇಲೆ ಕಾರು ಹತ್ತಿಸಲು ಯತ್ನಿಸಲಾಗಿದೆ ಘಟನೆಯಲ್ಲಿ ಯಾರಿಗೂ ಗಾಯವಾಗದಿದ್ದರೂ ಇದರಿಂದ ರೊಚ್ಚಿಗೆದ್ದ ಗುಂಪು ಸರ್ಕಾರಿ ಬಸ್ಸುಗಳನ್ನು ಪುಡಿಗಟ್ಟಿದ್ದಾರೆ. ಇನ್ನು ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಸಿಸಿಟಿವಿಯನ್ನು ಆಧರಿಸಿ ಶಾರುಖ್ ಮತ್ತು ಆತನ ಜೊತೆ ಓರ್ವ ಮಹಿಳೆಯನ್ನು ಕೂಡ ಬಂಧಿಸಲಾಗಿದೆ ಎಂದು ಆ್ಯನಿ ವರದಿಗಳು ತಿಳಿಸಿವೆ.ಬಂಧಿತ ಶಾರುಖ್ ಮೇ 30 ರಂದು ಮಧು ವಿಹಾರ್ ಪ್ರದೇಶದಿಂದ ಹೋಂಡಾ ಸಿಟಿ ಕಾರೊಂದು ಕಳವು ಮಾಡಿದ್ದ ಮತ್ತು ಈತನ ಮೇಲೆ ಹಲವು ಪ್ರಕರಣಗಳು ಇತರ ಪೊಲೀಸ್ ಠಾಣೆಯಲ್ಲೂ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.

Loading...

Leave a Reply

Your email address will not be published. Required fields are marked *