ಇರಾನ್ ರೆವಲ್ಯೂಷನರಿ ಪಡೆಗಳು ವಶಪಡಿಸಿಕೊಂಡಿರುವ ಬ್ರಿಟನ್ ಹಡಗಿನಿಂದ ಹದಿನೆಂಟು ಭಾರತೀಯರ ಬಿಡುಗಡೆಗೊಳಿಸಲು ಸಫಲವಾಗುವುದೇ ಭಾರತ ಸರ್ಕಾರ !

ಈ ಸುದ್ದಿಯನ್ನು ಶೇರ್ ಮಾಡಿ

ಇರಾನ್ ಸಮುದ್ರ ವ್ಯಾಪ್ತಿಯಲ್ಲಿದ್ದ ಬ್ರಿಟನ್ ಮೂಲದ ತೈಲ ಸಾಗಾಣಿಕೆ ಹಡಗನ್ನು ಇರಾನ್ ರೆವಲ್ಯೂಷನರಿ ಪಡೆಗಳು ವಶಪಡಿಸಿಕೊಂಡಿದ್ದಾರೆ .ಈ ಹಡಗಿನಲ್ಲಿ ಹದಿನೆಂಟು ಭಾರತೀಯರು ಸೇರಿದಂತೆ ಒಟ್ಟು23 ನೌಕರರನ್ನು ಇರಾನ್ ಬಂಧಿಸಿದೆ .ಎರಡು ವಾರಗಳ ಹಿಂದೆ ಸ್ಪೇನ್ನಲ್ಲಿ ಇರಾನ್ ತೈಲ ಸಾಗಾಣಿಕೆ ಹಡಗುಗಳನ್ನು ವಶಪಡಿಸಿಕೊಂಡಿದ್ದರ ಹಿಂದೆ ಬ್ರಿಟನ್ ಕೈವಾಡವಿದೆ ಎಂದು ಆರೋಪಿಸಿ ಪ್ರತಿಯಾಗಿ ಬ್ರಿಟನ್ ಹಡಗನ್ನು ವಶಪಡಿಸಿದೆ ಎಂದು ಇರಾನ್ ಹೇಳಿಕೊಂಡಿದೆ .ಸದ್ಯ ಇರಾನ್ ವರ್ಷದಲ್ಲಿರುವ ಭಾರತೀಯರ ಬಿಡುಗಡೆಗೆ ಭಾರತ ಸರ್ಕಾರ ಪ್ರಯತ್ನ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಬಂಧಿತ ನೌಕರರ ಸುರಕ್ಷಿತ ಬಿಡುಗಡೆಗೆ ಇರಾನ್ ಜತೆ ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ .ಇರಾನ್ ಅಮೆರಿಕ ನಡುವೆ ನಡೆಯುತ್ತಿರುವ ಜಟಾಪಟಿ ನಡುವೆಯೂ ಭಾರತ ಮಾತ್ರ ತನ್ನ ತಟಸ್ಥನಿಲುವು ತಳೆದಿದೆ. ಅಲ್ಲದೆ ಇರಾನ್ ಜೊತೆ ಒಳ್ಳೆಯ ಸಂಬಂಧ ಕೂಡ ಇದೆ ಈ ಕಾರಣದಿಂದ ಮುಂಬರುವ ದಿನಗಳಲ್ಲಿ ಭಾರತ ಸರ್ಕಾರ ಇರಾನ್ ವಶದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಬಹುದು ಎಂದು ಹೇಳಲಾಗುತ್ತಿದೆ .ಇರಾನ್ ರೆವಲ್ಯೂಷನರಿ ಪಡೆಗಳು ಯಾವ ರೀತಿ ಬ್ರಿಟನ್ ಹಡಗನ್ನು ವಶಪಡಿಸಿಕೊಂಡಿದ್ದಾರೆ ನೋಡಿ ಈ ವಿಡಿಯೋ

Loading...

Leave a Reply

Your email address will not be published. Required fields are marked *