ಚಂದ್ರಯಾನ -2 ಯಶಸ್ಸಿಗೆ ತಿರುಪತಿ ತಿಮ್ಮಪ್ಪ ನಲ್ಲಿ ಪ್ರಾರ್ಥಿಸಿದ ಇಸ್ರೋ ಅಧ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸುವುದಕ್ಕೆ ಭಾರತ ಕೈಗೊಂಡ ಚಂದ್ರಯಾನ -2 ಯಶಸ್ಸಿಗೆ ಇಸ್ರೋ ಅಧ್ಯಕ್ಷ ಕೆ ಶಿವನ್ ಶನಿವಾರ ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ .ಪ್ರತಿ ಬಾಹ್ಯಾಕಾಶ ಯಾನಕ್ಕೆ ಮುನ್ನ ಬೆಟ್ಟದ ಗುಡಿಯಲ್ಲಿ ಈ ಹಿಂದೆ ಪೂಜೆ ಸಲ್ಲಿಸುತ್ತಿದ್ದಂತೆ ಶಿವನ್ ಅವರು ಕೂಡಾ ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆದು ಬಾಲಾಜಿಯ ಆಶೀರ್ವಾದವನ್ನು ಕೋರಿದ್ದಾರೆ .ಚಂದ್ರಯಾನ ಪ್ರತಿಕೃತಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ ಇಸ್ರೊ ಅಧ್ಯಕ್ಷರಿಗೆ ಕೆಲವು ವಿಜ್ಞಾನಿಗಳು ಕೂಡ ಸಾಥ್ ನೀಡಿದ್ದಾರೆ .ಇಸ್ರೋ ಅಧ್ಯಕ್ಷರ ದೈವಭಕ್ತಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೂ ಹಲವರು ಲೇವಡಿ ಕೂಡ ಮಾಡಿದ್ದಾರೆ .ಸದ್ಯ ಚಂದ್ರಯಾನವನ್ನು ತಾಂತ್ರಿಕ ದೋಷದಿಂದ ದಿನಾಂಕವನ್ನು ಮುಂದೂಡಲಾಗಿದ್ದು ಶೀಘ್ರದಲ್ಲಿ ಅಧಿಕೃತ ದಿನಾಂಕ ಪ್ರಕಟಿಸುವುದಾಗಿ ಇಸ್ರೊ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Loading...

Leave a Reply

Your email address will not be published. Required fields are marked *