ಮಂಗಳೂರು :ಜಿಲ್ಲೆಯಾದ್ಯಂತ ಐಷಾರಾಮಿ ಕಾರಿನಲ್ಲಿ ಗೋ ಕಳ್ಳತನ ನಡೆಸುತ್ತಿದ್ದ ಆರೋಪಿ ಬಶೀರ್ ಪೊಲೀಸರ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಷಾರಾಮಿ ಕಾರಿನ ಮೂಲಕ ಜಿಲ್ಲೆಯಾದ್ಯಂತ ಗೋಕಳ್ಳತನದ ಮಾಡುತ್ತಿದ್ದ ಆರೋಪಿಯನ್ನು ವಿಶೇಷ ಪೊಲೀಸ್ ಅಧಿಕಾರಿಗಳ ತಂಡ ಬಂಧಿಸಿದೆ. ಬಂಧಿತ ಆರೋಪಿಯನ್ನು ಮೂಡಬಿದ್ರಿ ತೋಡಾರ್ ನಿವಾಸಿ ಬಶೀರ್ ಅಲಿಯಾಸ್ ಆಗ್ರಾ ಬಶೀರ್ ಎಂದು ಗುರುತಿಸಲಾಗಿದೆ .ಬಂಧಿತ ಆರೋಪಿ ಜಿಲ್ಲೆಯಲ್ಲಿ ನಡೆದ ಹಲವಾರು ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಈತನನ್ನು ಜುಲೈ 8ರಂದು ಪೊಲೀಸರು ತಮ್ಮ ಬಲೆಗೆ ಬೀಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ .ಬಂಧಿತ ಆರೋಪಿ ಗೋ ಕಳ್ಳತನವನ್ನು ತನ್ನ ಕಸುಬಾಗಿ ಮಾಡುತ್ತಿದ್ದು ಪೊಲೀಸರಿಂದ ರಕ್ಷಣೆ ಪಡೆಯಲು ಪ್ರಕರಣ ದಾಖಲು ಆದ ಕೂಡಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿ ನಂತರ ತನ್ನ ಅದೇ ಕಸುಬನ್ನು ಮುಂದುವರಿಸುವುದು ಈತನ ಚಾಳಿಯಾಗಿತ್ತು.ತಿಂಗಳುಗಳ ಹಿಂದೆ ಸುರತ್ಕಲ್ ನಿಂದ ಕಳವು ಮಾಡಿದ ಗೋವುಗಳನ್ನು ಐಷಾರಾಮಿ ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಬೆಳ್ತಂಗಡಿಯ ಮುಂಡಾಜೆ ಬಳಿ ಕಾರು ಅಪಘಾತಕ್ಕೀಡಾಗಿ ಐದು ಗೋವುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಈ ಕಾರಿನ ಚಾಲಕ ಬಷೀರ್ ಆಗಿದ್ದು ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ .ಬಶೀರ್ ವಿರುದ್ಧ ಕೊಡಗು ಮಂಗಳೂರು ಬಜ್ಪೆ ಮೂಡಬಿದ್ರೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ಕೂಡ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ .

Leave a Reply

Your email address will not be published. Required fields are marked *