ಕಾಶ್ಮೀರದಲ್ಲಿರುವ ಮಸೀದಿಗಳ ಮೇಲೆ ಕೇಂದ್ರದ ಹದ್ದಿನ ಕಣ್ಣು

ಈ ಸುದ್ದಿಯನ್ನು ಶೇರ್ ಮಾಡಿ

ಕಾಶ್ಮೀರದಲ್ಲಿರುವ ಎಲ್ಲಾ ಮಸೀದಿಗಳ ಮೇಲೆ ಕೇಂದ್ರ ಗೃಹ ಸಚಿವಾಲಯ ಹದ್ದಿನ ಕಣ್ಣನ್ನು ಇಟ್ಟಿದೆ .ಕಣಿವೆಯಲ್ಲಿರುವ ಎಲ್ಲಾ ಜಿಲ್ಲೆಗಳ ಮಸೀದಿಗಳು ಮತ್ತು ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ಗೃಹ ಸಚಿವಾಲಯ ಆದೇಶ ನೀಡಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ .ರಾಜ್ಯದಲ್ಲಿರುವ ಮಸೀದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಮಾಹಿತಿಯನ್ನು ಕೋರಿ ನೋಟಿಸ್ ಜಾರಿ ಮಾಡಲು ಗೃಹ ಸಚಿವಾಲಯ ಸೂಚನೆ ನೀಡಿದ್ದು ಮಸೀದಿಯಲ್ಲಿ ಮೌಲ್ವಿಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಾರೆ ಸೇರಿ ಇತರ ಮಾಹಿತಿಯನ್ನು ನೀಡಬೇಕಾಗಿ ಗ್ರಹ ಸಚಿವಾಲಯ ಆದೇಶ ನೀಡಿದೆ.ಕಾಶ್ಮೀರದಲ್ಲಿ ಕೆಲ ಮಸೀದಿಯಲ್ಲಿ ದೇಶದ್ರೋಹಕ್ಕೆ ಕುಮ್ಮಕ್ಕು ಮತ್ತು ಪ್ರತ್ಯೇಕತಾವಾದಿಗಳು ಮಸೀದಿಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಈ ಆದೇಶ ಹೊರಡಿಸಿದೆ ಎನ್ನಲಾಗಿದೆ .ಕೇಂದ್ರ ಸರ್ಕಾರದ ಈ ಆದೇಶವನ್ನು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಶೇಕ್ ಅಬ್ದುಲ್ಲಾ ಮತ್ತು ಪಿಡಿಪಿ ನಾಯಕರು ಖಂಡಿಸಿದ್ದಾರೆ .

Loading...

Leave a Reply

Your email address will not be published. Required fields are marked *