ತಲೆಮರೆಸಿಕೊಂಡ ಶಾಸಕ ನಾಹಿದ್ ಹಸ್ಸನ್ ನನ್ನು ಉತ್ತರಪ್ರದೇಶ ಪೊಲೀಸರು ಯಾವ ರೀತಿ ಹುಡುಕುತಿದ್ದಾರೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

ಉತ್ತರ ಪ್ರದೇಶ :ವಿವಿಧ ಪ್ರಕರಣಗಲ್ಲಿ ಭಾಗಿಯಾಗಿ ತಲೆಮರೆಸಿಕೊಂಡ ಸಮಾಜವಾದಿ ಪಕ್ಷದ ಕೈರಣ ವಿಧಾನ ಸಭಾ ಕ್ಷೇತ್ರದ ಶಾಸಕ ನಾಹಿದ್ ಹಸ್ಸನ್ ಬಂಧನಕ್ಕೆ ಉತ್ತರ ಪ್ರದೇಶ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಸ್ಥಳೀಯ ಅಧಿಕಾರಿಗಳ ಜೊತೆ ಅಸಭ್ಯ ವರ್ತನೆ ,ದಾಖಲೆಯಿಲ್ಲ ವಾಹನ ಚಲಾವಣೆ ಮತ್ತು ಕೋಮು ಗಲಭೆಗೆ ಕುಮ್ಮಕ್ಕು ಸೇರಿ ಹಲವು ಪ್ರಕರಣಗಳನ್ನು ಎದುರುಸುತ್ತಿದ್ದಾರೆ ನಾಹಿದ್ ಹಸ್ಸನ್. ಪೊಲೀಸರ ಮನವಿಯ ಮೇರೆಗೆ ಸೆಕ್ಷನ್ 82 ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದ್ದು ,ನಾಹಿದ್ ಹಸ್ಸನ್ ಬಂಧನಕ್ಕೆ ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಅಜಯ್ ಕುಮಾರ್ ತಿಳಿಸಿದ್ದಾರೆ .ಇನ್ನುಶಾಸಕ ನಾಹಿದ್ ಹಸ್ಸನ್ ತಲೆಮರೆಸಿಕೊಂಡಿದ್ದಾರೆ ಎಂದು ಸಾರ್ವಜನಿಕವಾಗಿ ಡಂಗೂರ ಕೂಡ ಪೊಲೀಸರು ಸಾರಿದ್ದು ವಿಶೇಷವಾಗಿದೆ, ವಿಡಿಯೋ ನೋಡಿ

Loading...

Leave a Reply

Your email address will not be published. Required fields are marked *