ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಿದ ವಿಶೇಷ ಅಧಿಕಾರ : ಲಂಕಾ ಸ್ಫೋಟ ತನಿಖೆಯನ್ನು ಕೈಗೆತ್ತಿಕೊಂಡ ಎನ್ಐಎ

ಈ ಸುದ್ದಿಯನ್ನು ಶೇರ್ ಮಾಡಿ

ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆಗೆ ತಿದ್ದುಪಡಿಗೆ ಸಂಸತ್ ಅಂಗೀಕಾರ ನೀಡಿದ ಬೆನ್ನಲ್ಲೇ ವಿದೇಶಗಳಲ್ಲಿ ತನಿಖೆ ನಡೆಸಲು ಎನ್ಐಎ ಮುಂದಾಗಿದೆ .ಶ್ರೀಲಂಕಾದಲ್ಲಿ ನಡೆದ ಸ್ಫೋಟ ಪ್ರಕರಣವನ್ನು ಎನ್ಐಎ ಕೈಗೆತ್ತಿಕೊಳ್ಳಲಿದ್ದು ಶ್ರೀಲಂಕಾ ಸ್ಫೋಟದ ಆರೋಪಿಗಳು ಮೊದಲು ಕಾಶ್ಮೀರಕ್ಕೆ ಬಂದು ಬಳಿಕ ಭಾರತದ ವಿವಿಧ ಕಡೆಗಳಲ್ಲಿ ಸುತ್ತಾಡಿ ಕೊನೆಯದಾಗಿ ಶ್ರೀಲಂಕಾ ಸೇರಿದ್ದರು ಎಂದು ಗುಪ್ತಚರ ಮಾಹಿತಿ ಸಿಕ್ಕಿತ್ತು ಹೀಗಾಗಿ ಪ್ರಕರಣದ ತನಿಖೆಯನ್ನು ಎನ್ಐಎ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ .ರಾಷ್ಟ್ರೀಯ ತನಿಖಾ ಸಂಸ್ಥೆ ವಿದೇಶದಲ್ಲಿನ ಉಗ್ರರ ದಾಳಿಯ ಪ್ರಕರಣದ ಕುರಿತು ಇದೇ ಮೊದಲ ಬಾರಿ ತನಿಖೆ ಕೈಗೊಂಡಿದೆ ಎಂಬುದು ವಿಶೇಷ .ಈವರೆಗೆ ಎನ್ಐಎ ಗೆ ಭಾರತದಲ್ಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುವ ಅಧಿಕಾರವಿತ್ತು .ಕಾಯ್ದೆ ತಿದ್ದುಪಡಿ ಬಳಿಕ ವಿದೇಶದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತೀಯರನ್ನು ಗುರಿಯಾಗಿಸಿ ದಲ್ಲಿ ಅದರ ತನಿಖೆಯನ್ನು ಕೂಡ ನಡೆಸಲು ಎನ್ಐಎಗೆ ಅಧಿಕಾರ ನೀಡಲಾಗಿದೆ .

Loading...

Leave a Reply

Your email address will not be published. Required fields are marked *