ಬಲವಂತವಾಗಿ ಮಸೀದಿಗೆ ಕೊಂಡೊಯ್ದು ಹಿಂದೂ ಬಾಲೆಯರ ಮತಾಂತರ : ಪಾಕಿಸ್ತಾನ ವಿರುದ್ಧ ಸಿಡಿದೆದ್ದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಿಂದೂಗಳು ಸುರಕ್ಷಿತವಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ .ಘಟನೆಯೊಂದರಲ್ಲಿ ಸಿಂಧ್ ಪ್ರಾಂತ್ಯದ ಡಾರ್ಕ್ ಪಟ್ಟಣದ ಹೋಳಿ ಹಬ್ಬದ ಸಮಯ ಇಬ್ಬರು ಅಪ್ರಾಪ್ತ ಹಿಂದೂ ಬಾಲಕಿಯರನ್ನು ಮತಾಂದ ಗುಂಪೊಂದು ಕುಟುಂಬಕ್ಕೆ ದಾಳಿ ಮಾಡಿ ಅವರನ್ನು ಅಪಹರಿಸಿ ಮಸೀದಿಗೆ ಕೊಡೊಯ್ದು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ್ದಾರೆ. ನಂತರ ಮೌಲಿಯೊಬ್ಬರು ಮುಸ್ಲಿಂ ಯುವಕರ ಜೊತೆ ಅವರ ಮದುವೆ ಮಾಡಿಸುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿ ಭಾರತ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಿದೆ. ಪರಿಣಾಮ ಪಾಕಿಸ್ತಾನ ಪ್ರಧಾನಿ ಘಟನೆ ಸಂಬಂಧಿಸಿ ತನಿಖೆಗೆ ಆದೇಶಿಸಿದ್ದಾರೆ .

Loading...

Leave a Reply

Your email address will not be published. Required fields are marked *