ರಚಿ ಭಾರತಿ ಕಾನೂನು ಹೋರಾಟಕ್ಕೆ ದೇಶದಾದ್ಯಂತ ಹರಿದು ಬಂದ ಆರ್ಥಿಕ ಸಹಾಯ

ಈ ಸುದ್ದಿಯನ್ನು ಶೇರ್ ಮಾಡಿ

ಜಾರ್ಖಂಡ್ ರಾಂಚಿ ಸಾಮಾಜಿಕ ಜಾಲತಾಣದಲ್ಲಿ ಹತ್ತೊಂಬತ್ತು ವರ್ಷದ ವಿದ್ಯಾರ್ಥಿನಿಯೋರ್ವರು, ಮುಸ್ಲಿಮರ ಕುರಿತಾಗಿ ಹಂಚಿಕೊಂಡ ಪೋಸ್ಟ್ ಕುರಿತಂತೆ ಬಂಧನಕ್ಕೊಳಗಾಗಿ ಜಾಮೀನು ಪಡೆದಿದ್ದರು .ಸ್ಥಳೀಯ ನ್ಯಾಯಾಲಯ ವಿದ್ಯಾರ್ಥಿನಿ ರಚಿ ಭಾರತಿಯವರಿಗೆ ಜಾಮೀನು ನೀಡುವಾಗ 5 ಕುರಾನ್ ಪ್ರತಿಗಳನ್ನು ಹದಿನೈದು ದಿನಗಳೊಳಗೆ ಶಾಲಾ ಕಾಲೇಜುಗಳ ಗ್ರಂಥಾಲಯಕ್ಕೆ ನೀಡಬೇಕೆಂದು ಆದೇಶಿಸಿತ್ತು .ನ್ಯಾಯಮೂರ್ತಿ ಮನೀಶ್ ಕುಮಾರ್ ಸಿಂಗ್ ನೀಡಿದ ಆದೇಶದಿಂದ ಅಸಮಾಧಾನಗೊಂಡ ರಚಿ ಭಾರತಿ ಅವರು ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ಖಾಸಗಿ ವಾಹಿನಿಗೆ ಪ್ರತಿಕ್ರಿಯಿಸಿದ್ದರು. ಅಲ್ಲದೇ ಕೋರ್ಟ್ ಆದೇಶದ ಬಗ್ಗೆ ಮಾತನಾಡಿರುವ ಅವರು ಇಂದು ಕುರಾನ್ ಹಂಚಲು ಹೇಳುತ್ತಾರೆ. ನಾಳೆ ಇಸ್ಲಾಂ ಸ್ವೀಕರಿಸಲು ಹೇಳಬಹುದು .ಈ ಹಿಂದೆ ಮುಸ್ಲಿಮರಿಗೆ ರಾಮಾಯಣ ಮಹಾಭಾರತವನ್ನು ಹಂಚಲು ಆದೇಶ ನೀಡಿದೆಯೇ ಎಂದು ರತಿ ಭಾರತಿ ಪ್ರಶ್ನಿಸಿದ್ದಾರೆ .

Loading...

ಈ ನಡುವೆ ಕೋರ್ಟ್ ಆದೇಶಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಆಕ್ರೋಶ ವ್ಯಕ್ತಪಡಿಸಿದ್ದು. ರಚಿ ಭಾರತಿಗೆ ಬೇಕಾದ ಕಾನೂನು ಹೋರಾಟ ಹೋರಾಟಕ್ಕೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ .ಈ ಸಹಾಯವನ್ನು ಯಾಚಿಸಿದ ಮೊದಲ ಎರಡು ಗಂಟೆಯಲ್ಲಿ ಎರಡು ಲಕ್ಷ ಹಣ ದೇಶದಾದ್ಯಂತ ರಚಿ ಭಾರತಿ ಅವರ ಖಾತೆಗೆ ಜಮಾ ಮಾಡಲಾಗಿದೆ. ಸದ್ಯ 6 ಲಕ್ಷ ಹಣವನ್ನು ದೇಶದಾದ್ಯಂತ ಜನರು ರುಚಿ ಖಾತೆಗೆ ಹಾಕಿ ಕಾನೂನು ಹೋರಾಟಕ್ಕೆ ನಾವಿದ್ದೇವೆ ಎಂಬ ಸಂದೇಶವನ್ನು ನೀಡಿದ್ದಾರೆ.ಇನ್ನು ರಚಿ ಭಾರತಿ ಹೋರಾಟಕ್ಕೆ ರಾಂಚಿ ಹೈಕೋರ್ಟ್ ವಕೀಲರಾದ ಅಲೋಕ್ ಶ್ರೀವಾಸ್ತವ ಈ ಕಾನೂನು ಹೋರಾಟಕ್ಕೆ ನಾನಿದ್ದು ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಕೂಡ ಯುವತಿ ನೆರವಿಗೆ ಬಂದಿದ್ದು ಕೇಂದ್ರ ಸಚಿವ ಸರಿಯೂ ರೈ ಈ ವಿಚಾರವನ್ನು ಗಮನಿಸುವಂತೆ ತಿಳಿಸಿದ್ದಾರೆ .ಬಿಜೆಪಿ ವಕ್ತಾರ ತೇಜಿಂದರ್ ಸಿಂಗ್ ಬಗ್ಗಾ ಕೂಡ ಸುಪ್ರೀಂ ಕೋರ್ಟ್ ನಲ್ಲಿ ಯುವತಿಗೆ ದಾವೆ ಹೂಡುವಲ್ಲಿ ಸಹಾಯ ಮಾಡುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *