ರಫೇಲ್ ಯುದ್ಧ ವಿಮಾನಕ್ಕೆ ಆಯುಧ ಪೂಜೆ ನಡೆಸಿ ಸ್ವೀಕರಿಸಿದ ರಾಜನಾಥ್ ಸಿಂಗ್ (video)

ಈ ಸುದ್ದಿಯನ್ನು ಶೇರ್ ಮಾಡಿ

ಅತ್ಯಾಧುನಿಕ ಯುದ್ಧ ವಿಮಾನ ರಫೇಲ್ ವಿಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಸ್ವೀಕರಿಸಿದರು. ಭಾರತ – ಫ್ರಾನ್ಸ್‌ ನಡುವೆ ನಡೆದಿರುವ ರಫೇಲ್ ಯುದ್ಧ ವಿಮಾನಗಳ ಒಪ್ಪಂದಕ್ಕೆ ಭಾರತಕ್ಕೆ ರವಾನೆ ಆಗಬೇಕಿರುವ 36 ವಿಮಾನಗಳ ಪೈಕಿ, ಮೊದಲ ವಿಮಾನವನ್ನು ಬಂದರು ನಗರವಾದ ಬೊಡೆಕ್ಸ್‌ನ ಮೆರಿಗೆನ್ಸ್ ವಾಯುನೆಲೆಯಲ್ಲಿ ಫ್ರಾನ್ಸ್‌ನ ಅಧಿಕಾರಿಗಳಿಂದ ಅಧಿಕೃತವಾಗಿ ರಾಜನಾಥ್ ಸಿಂಗ್ ಅವರು ಆಯುಧ ಪೂಜೆ ನಡೆಸಿ ಸ್ವೀಕರಿಸಿದರು.ಈ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಶಸ್ತ್ರ ಸಜ್ಜಿತ ರಫೇಲ್ ಯುದ್ಧ ವಿಮಾನ ಎಲ್ಲಾ ಹವಾಮಾನಗಳಲ್ಲಿಯೂ ನಿಖರವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದ್ದು, ಭಾರತೀಯ ವಾಯುಪಡೆಗೆ ಇದ್ದ ಈ ಕೊರತೆಯನ್ನು ಇದರಿಂದ ತುಂಬಿದಂತಾಗಿದೆ.ಫ್ರಾನ್ಸ್‌ನ ದಸಾಲ್ಟ್ ವಿಮಾನ ನಿರ್ಮಾಣ ಸಂಸ್ಥೆಯೊಂದಿಗೆ 2016 ರಲ್ಲಿ ನಡೆದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಂತೆ, ಭಾರತಕ್ಕೆ ದಸಾಲ್ಟ್ 36 ಯುದ್ಧ ವಿಮಾನಗಳನ್ನು ಕಳುಹಿಸುತ್ತಿದೆ. 60,000 ಕೋಟಿ ರೂ. ಮೊತ್ತದ ರಕ್ಷಣಾ ಒಪ್ಪಂದದ ಮೊದಲ ವಿಮಾನ ಆರ್‌ಬಿ – 01 ಅನ್ನು ಇಂದು ಸಚಿವ ರಾಜನಾಥ್ ಸಿಂಗ್ ಅವರು ಸ್ವೀಕರಿಸುವ ಮೂಲಕ ಮೊದಲ ವಿಮಾನ ಭಾರತೀಯ ವಾಯುಪಡೆಯ ಬತ್ತಳಿಕೆಗೆ ಸೇರಿದಂತಾಗಿದೆ.

ವಿಜಯದಶಮಿಯ ದಿನವಾದ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸಿದರು. ಭಾರತೀಯ ಸಂಪ್ರದಾಯದಲ್ಲಿ ಶಸ್ತ್ರ ಪೂಜೆ ಶತಮಾನಗಳಿಂದ ಜಾರಿಯಲ್ಲಿದೆ. ವಿಜಯದಶಮಿ ದಿನದಂದು ದೇಶಾದ್ಯಂತ ಆಯುಧ ಪೂಜೆ ನಡೆಯುತ್ತದೆ. ರಜಪೂತ್ ದೊರೆ ಮಹಾರಾಣಾ ಪ್ರತಾಪ್ ತನ್ನ ವೈರಿಗಳ ವಿರುದ್ಧ ಯುದ್ಧ ಆರಂಭಕ್ಕೂ ಮುನ್ನ ಶಸ್ತ್ರಪೂಜೆ ನೆರವೇರಿಸುತ್ತಿದ್ದರು.ಭಾರತೀಯ ವಾಯಪಡೆಯ ದಿನಾಚರಣೆಯೂ ಇಂದೇ ಇರುವುದರಿಂದ ಇಂದು ರಕ್ಷಣಾ ಸಚಿವರು, ರಫೇಲ್ ಯುದ್ಧ ವಿಮಾನಕ್ಕೆ ಆಯುಧ ಪೂಜೆ ನೆರವೇರಿಸಿದ್ದು, ಹೆಚ್ಚು ರೋಚಕ ಹಾಗೂ ಅರ್ಥಪೂರ್ಣವಾಗಿತ್ತು.

Loading...

Leave a Reply

Your email address will not be published. Required fields are marked *