ಬಹುಸಂಖ್ಯಾತರ ಆಕ್ರೋಶದ ಪರಿಣಾಮ :ರಿಚಾ ಭಾರತಿಗೆ ಕುರಾನ್ ಹಂಚಲು ನೀಡಿದ್ದ ಷರತ್ತನ್ನು ವಾಪಸ್ ಪಡೆದ ರಾಂಚಿ ನ್ಯಾಯಾಲಯ

ಈ ಸುದ್ದಿಯನ್ನು ಶೇರ್ ಮಾಡಿ

ಜಾರ್ಖಂಡ್ ರಾಂಚಿ ಸ್ಥಳೀಯ ನ್ಯಾಯಾಲಯ ವಿದ್ಯಾರ್ಥಿನಿ ರಿಚ ಭಾರತಿಗೆ ಹಾಕಿದ ಜಾಮೀನು ಷರತ್ತನ್ನು ವಾಪಸ್ ಪಡೆದಿದೆ .ಹತ್ತೊಂಬತ್ತು ವರ್ಷದ ಕಾಲೇಜು ವಿದ್ಯಾರ್ಥಿನಿ ಭಾರತಿ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯದ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಪೋಸ್ಟ್ ಮಾಡಿದ್ದರು.ರಿಚ ಭಾರತಿ ಮಾಡಿರುವ ಪೋಸ್ಟ್ ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರಲಾಗಿದೆ ಎಂದು ಸ್ಥಳೀಯ ಮುಸ್ಲಿಂ ಸಂಘಟನೆಗಳು ಪ್ರಕರಣ ದಾಖಲಿಸಿದ್ದವು ನಂತರದ ಬೆಳವಣಿಗೆಯಲ್ಲಿ ಭಾರತೀಯವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನೀಶ್ ಕುಮಾರ್ ಸಿಂಗ್ ಅವರು ರೀಚಾ ಭಾರತಿಗೆ ಜಾಮೀನು ನೀಡಿ 5 ಕುರಾನ್ ಪ್ರತಿಯನ್ನು ವಿವಿಧ ಕಾಲೇಜು ಲೈಬ್ರೆರಿಗೆ ಹಂಚಲು ಷರತ್ತನ್ನು ವಿಧಿಸಿದ್ದರು .ನ್ಯಾಯಮೂರ್ತಿಗಳ ಈ ಆದೇಶದಿಂದ ಅಸಮಾಧಾನಗೊಂಡ ರಿಚಾ ಭಾರತೀಯರು ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದರು .ನ್ಯಾಯಾಲಯದ ಈ ಆದೇಶ ಬಹುಸಂಖ್ಯಾತ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿ ದೇಶದೆಲ್ಲೆಡೆ ರೀಚಾ ಭಾರತಿ ಕಾನೂನು ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಯಿತು. ಅಲ್ಲದೆ ರಾಷ್ಟ್ರೀಯ ವಾಹಿನಿಗಳಲ್ಲಿ ಚರ್ಚೆಯಾಗಿ ನಂತರದ ಬೆಳವಣಿಗೆಯಲ್ಲಿ ನ್ಯಾಯಾಲಯ ತಾನು ಹಾಕಿದ ಜಾಮೀನು ಷರತ್ತನ್ನು ಇದೀಗ ವಾಪಸ್ ಪಡೆದಿದೆ .

Loading...

Leave a Reply

Your email address will not be published. Required fields are marked *