ರಾಂಚಿ :ಹಿಂದೂ ಯುವತಿಯೊಬ್ಬಳಿಗೆ ಜಾಮೀನು ನೀಡಿ ಕುರಾನ್ ಹಂಚಲು ಷರತ್ತು ಹಾಕಿದ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ : ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಪೋಸ್ಟ್ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ ಎಂಬ ಆರೋಪದ ಪ್ರಕರಣದ ಕುರಿತಾಗಿ ವಿಚಾರಣೆ ನಡೆಸಿದ ರಾಂಚಿಯ ಸ್ಥಳೀಯ ನ್ಯಾಯಾಲಯವೊಂದು ಯುವತಿಗೆ ಜಾಮೀನು ಮಂಜೂರು ಮಾಡಿದೆ. ಜಾಮೀನಿನಲ್ಲಿ 5 ಕುರಾನ್ ಗ್ರಂಥಗಳನ್ನು ಹಂಚ ಬೇಕಾಗಿ ಷರತ್ತು ವಿಧಿಸಿದೆ .ನ್ಯಾಯಮೂರ್ತಿ ಮನೀಶ್ ಸಿಂಗ್ ಅವರು ಈ ಆದೇಶ ನೀಡಿದ್ದು .ವಿದ್ಯಾರ್ಥಿನಿ ರಿಚಾ ಭಾರತಿ ಸಾಮಾಜಿಕ ಜಾಲತಾಣದಲ್ಲಿ ಭಯೋತ್ಪಾದನೆ ಸಂಬಂಧಿಸಿ ಮುಸ್ಲಿಂ ಸಮುದಾಯದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು .ಇದರಿಂದ ಆಕ್ರೋಶಗೊಂಡ ಸ್ಥಳೀಯ ಮುಸ್ಲಿಂ ಸಂಘಟನೆಗಳು ಯುವತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದರು. ನಂತರದ ಬೆಳವಣಿಗೆಯಲ್ಲಿ ಸ್ಥಳೀಯ ಹಿಂದೂ ಸಂಘಟನೆಗಳು ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವು .ನ್ಯಾಯಾಲಯ ನೀಡಿದ ಆದೇಶದಲ್ಲಿ ಯುವತಿಗೆ 5 ಕುರಾನ್ ಪ್ರತಿಯನ್ನು ಖರೀದಿಸಿ ಮೊದಲ ಪ್ರತಿಯನ್ನು ಅಂಜುಮಾನ್ ಇಸ್ಲಾಮಿಯಾ ಕಮಿಟಿಗೆ ,ಇನ್ನು ನಾಲ್ಕು ಪ್ರತಿಯನ್ನು ವಿವಿಧ ಕಾಲೇಜುಗಳ ಲೈಬ್ರೆರಿಗೆ ನೀಡಲು ಆದೇಶಿಸಿದ .

Loading...

ಇನ್ನು ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ ರಿಚಾ ಭಾರತಿ ಅವರು ನಾನು ನನ್ನ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದೇನೆ. ಇದನ್ನೇ ದೊಡ್ಡ ವಿಷಯವಾಗಿ ಕೆಲ ಮುಸ್ಲಿಂ ಸಂಘಟನೆಗಳು ನನ್ನನ್ನು ಗುರಿಯಾಗಿಸಿದೆ. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ದಾವೆ ಹೂಡುವುದಾಗಿ ಯುವತಿ ಪ್ರತಿಕ್ರಿಯಿಸಿದ್ದಾರೆ .ಇಂದು ಕುರಾನ್ ಹಂಚಲು ಹೇಳುತ್ತಾರೆ ನಾಳೆ ಮತಾಂತರ ಆಗಲು ಹೇಳಬಹುದು ಇದನ್ನು ನಾನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.ಯುವತಿ ಖಾಸಗಿ ವಾಹಿನಿಗೆ ನೀಡಿದ ಪ್ರತಿಕ್ರಿಯೆ ಇಲ್ಲಿದೆ ನೋಡಿ

Leave a Reply

Your email address will not be published. Required fields are marked *