ಕರ್ನಾಟಕದಲ್ಲಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಹೊರಹಾಕಲು ಎನ್ಆರ್ ಸಿ ಜಾರಿ ಮಾಡಲು ಸಂಸತ್ತಿನಲ್ಲಿ ಆಗ್ರಹಿಸಿದ ತೇಜಸ್ವಿ ಸೂರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಯುವ ಸಂಸದ ತೇಜಸ್ವಿ ಸೂರ್ಯ ಇಂದು ಸಂಸತ್ತಿನಲ್ಲಿ ಕರ್ನಾಟಕದಲ್ಲಿರುವ ಅಕ್ರಮ ವಲಸಿಗರ ಕುರಿತು ಧ್ವನಿ ಎತ್ತಿದ್ದಾರೆ. ಈ ಕುರಿತು ಸಂಸತ್ನಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಸಾವಿರಾರು ಅಕ್ರಮ ಬಾಂಗ್ಲಾ ವಲಸಿಗರು ಬಂದು ಸಮಾಜಘಾತುಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೆ ನಿನ್ನೆಯಷ್ಟೇ ಅಕ್ರಮ ಬಾಂಗ್ಲಾ ವಲಸಿಗ ಉಗ್ರ ಚಟುವಟಿಕೆಯಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ .ಬೆಂಗಳೂರು ಚಿಕ್ಕಮಗಳೂರಿನಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರು ಸರ್ಕಾರ ಮತ್ತು ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿ ಆಧಾರ್ ಮತ್ತು ಇತರ ಸೌಲಭ್ಯವನ್ನು ಪಡೆದು ಸ್ಥಳೀಯರ ಉದ್ಯೋಗ ಅವಕಾಶವನ್ನು ಕಬಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವರು ಮತ್ತು ಸರ್ಕಾರ ಕರ್ನಾಟಕದಲ್ಲೂ ಎನ್ಆರ್ಸಿ ಜಾರಿಗೊಳಿಸಿ ಅಕ್ರಮ ವಲಸಿಗರನ್ನು ಹೊರ ಹಾಕಬೇಕೆಂದು ಮನವಿ ಮಾಡಿದ್ದಾರೆ.ತೇಜಸ್ವಿ ಸೂರ್ಯ ಅವರ ಭಾಷಣದ ತುಣುಕು ಇಲ್ಲಿದೆ ನೋಡಿ

Leave a Reply

Your email address will not be published. Required fields are marked *